`ಚಲ್ಲಾಪಿಲ್ಲಿ` ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ
Posted date: 31 Thu, Jan 2013 ? 09:55:25 AM

 ಶೈನ್‌ಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೇಶ್ ಭಂಡಾರಿ ಅವರು ನಿರ್ಮಿಸುತ್ತಿರುವ ‘ಚಲ್ಲಾಪಿಲ್ಲಿ ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ. ಮಿಷ್ಠ ಅವರು ಸಂಗೀತ ನೀಡುತ್ತಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಜೆಸ್ಸಿಗಿಫ಼್ಟ್, ಅನುರಾಧಾಭಟ್, ನಕುಲ್, ಕಾರ್ತಿಕ್ ಹಾಗೂ ಮಾಲತಿ ಈ ಚಿತ್ರದ ಹಾಡುಗಳನ್ನು ಹಾಡುತ್ತಿದ್ದಾರೆ.
     ರಂಗಭೂಮಿಯಲ್ಲಿ ಅನುಭವ ಪಡೆದಿರುವ ಹಾಗೂ ಹಲವು ತುಳು ಚಿತ್ರಗಳಿಗೆ ಸಹನಿರ್ದೇಶಕರಾಗಿ ದುಡಿದಿರುವ ಸಾಯಿಕೃಷ್ಣ(ಕುಡ್ಲ) ಈ ಚಿತ್ರದ ನಿರ್ದೇಶಕರು.
     ವಿಜಯರಾಘವೇಂದ್ರ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯನಾಗ್. ಶೋಭರಾಜ್, ನವೀನ್‌ಪಟೇಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ್ ರೈ, ಮಂದಾರ ಹಾಗೂ ಮಂಗಳೂರಿನ ರಂಗಭೂಮಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾಜಿಮುಖ್ಯಮಂತ್ರಿ ಸದಾನಂದಗೌಡರ ಅಭಿನಯ ಈ ಚಿತ್ರದ ವಿಶೇಷ.
    ಪಿ.ಎಲ್.ರವಿ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹರ್ಷ, ರಾಜೇಶ್, ಮಾಲೂರುಶ್ರೀನಿವಾಸ್ ನೃತ್ಯ ನಿರ್ದೇಶನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಸುಹಾಸ್ ಸಹನಿರ್ದೇಶನ ‘ಚಲ್ಲಾಪಿಲ್ಲಿ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed